ಮೈಸೂರು: ಶಾಲಾ ಬಾಲಕಿ ಮೇಲೆ ಬಸ್ ಹರಿದ ಪ್ರಕರಣ ಹಿನ್ನೆಲೆ ಬಾಲಕಿ ಮನೆಗೆ ಬಿಇಒ ರೇವಣ್ಣ ಭೇಟಿ ನೀಡಿ, ಮಗುವಿನ ಆರೋಗ್ಯ ಪರಿಸ್ಥಿತಿ ಕುರಿತಾಗಿ ವಿಚಾರಿಸಿದರು. ಪೋಷಕರು ಡ್ರೈವರ್ ನಿರ್ಲಕ್ಷ್ಯದಿಂದಾಗಿ ಹೀಗಾಗಿದೆ ಎಂದು ಡ್ರೈವರ್ ವಿರುದ್ಧ ಕ್ರಮಕ್ಕೆ ಆಗ್ರಹಿಸಿದರು. ಸಣ್ಣ ಪುಟ್ಟ ಗಾಯಗಳಿಂದ ಪಾರಾದ ಬಾಲಕಿಗೆ ಸಾಂತ್ವನವನ್ನು ಬಿಇಒ ರೇವಣ್ಣ ಹೇಳಿದ್ದಾರೆ. ಇನ್ನು ಮುಂದೆ ಇಂತಹ ಘಟನೆ ಮರುಕಳಿಸದಂತೆ ಗಮನ ಹರಿಸಬೇಕೆಂದು ಪೋಷಕರ ತಾಕೀತು ಮಾಡಿದರು.
