ಮೈಸೂರು: ಪತಿ ಮಾಡಿದ ಸಾಲಕ್ಕೆ ಬ್ಯಾಂಕ್ನಿಂದ ನೋಟಿಸ್ ಬಂದಿದ್ದು, ನೋಟಿಸ್‌ಗೆ ಹೆದರಿ ಪತ್ನಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಸಾಲಿಗ್ರಾಮ ತಾಲೂಕಿನ ಬೆಟ್ಟಹಳ್ಳಿ ಗ್ರಾಮದಲ್ಲಿ ನಡೆದಿದೆ. ಗ್ರಾಮದ ನಿವಾಸಿ ರಂಗಮ್ಮ (70) ಆತ್ಮಹತ್ಯೆಗೆ ಶರಣಾಗಿದ್ದು, ಮನೆಯ ಹಿಂಭಾಗದ ಶೌಚಾಲಯದಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಮಾಡಿಕೊಂಡಿದ್ದಾರೆ. ಪತಿ ಯಣ್ಣೇ ಗೌಡ 6 ವರ್ಷಗಳ ಹಿಂದೆ ಹೊಳೆನರಸೀಪುರ ತಾಲೂಕಿನ ಸೋಮನಹಳ್ಳಿಯ ಕರ್ನಾಟಕ ಗ್ರಾಮೀಣ ಬ್ಯಾಂಕ್ ನಲ್ಲಿ ಜಮೀನು, ಹೊಗೆಸೊಪ್ಪಿನ ಬ್ಯಾರನ್ ಆಧಾರದ ಮೇಲೆ ಸಾಲವನ್ನು ಪಡೆದಿದ್ದರು. ಅಸಲು, ಬಡ್ಡಿಯಿಂದ 8.50 ಲಕ್ಷ ರೂ. ಕಟ್ಟುವಂತೆ ಬ್ಯಾಂಕ್ ನೋಟಿಸ್ ಕಳುಹಿಸಿತ್ತು. ಇನ್ನು ಈ ಕುರಿತು ಮೃತರ ಪುತ್ರ ಶೆಟ್ಟಿಗೌಡ ಸಾಲಿಗ್ರಾಮ ಠಾಣೆಯಲ್ಲಿ ದೂರು ನೀಡಿದ್ದಾರೆ ಎಂದು ತಿಳಿದು ಬಂದಿದೆ.
