*ಸಂಪಲ್ಮೂಲ ವ್ಯಕ್ತಿ ಸಂಧಾನ ಕೃಷ್ಣನ್ ಅಭಿಪ್ರಾಯ
ಪ್ರತಿನಿಧಿ ವರದಿ ಹನಗೋಡು
ಡಿಜಿಟಲ್ ಯುಗದಲ್ಲಿ ಪ್ರತಿ ವಿದ್ಯಾರ್ಥಿಯೂ ಕೌಶಲಗಳನ್ನು ಕರಗತ ಮಾಡಿಕೊಳ್ಳಬೇಕು ಮತ್ತು ಕೌಶಲಗಳನ್ನು ಪಟ್ಟಿ ಮಾಡಿಕೊಂಡು, ಅದನ್ನು ವರ್ಧಿಸಿಕೊಳ್ಳಬೇಕು ಎಂದು ಸಂಪಲ್ಮೂಲ ವ್ಯಕ್ತಿ ಸಂಧಾನ ಕೃಷ್ಣನ್ ತಿಳಿಸಿದರು.
ಹನಗೋಡಿನ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಿಂದ ಹಿಂಡ ಗುಡ್ಲು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆಯುತ್ತಿರುವ ಎನ್.ಎಸ್.ಎಸ್. ವಾರ್ಷಿಕ ವಿಶೇಷ ಶಿಬಿರದ ಉಪನ್ಯಾಸ ಕಾರ್ಯಕ್ರಮದಲ್ಲಿ ಮಾತನಾಡಿದರು.
ಪ್ರಸ್ತುತ ಜಗತ್ತಿನಲ್ಲಿ ಸೇವಾಕ್ಷೇತ್ರ ಹೆಚ್ಚು ಬೆಳೆಯುತ್ತಿದ್ದು, ಬಹಳಷ್ಟು ಉದ್ಯೋಗಾವಕಾಶಗಳನ್ನು ಕಲ್ಪಿಸಿಕೊಡುತ್ತಿದೆ. ಹಾಗಾಗಿ, ವಿದ್ಯಾರ್ಥಿಗಳು ಆ ಕ್ಷೇತ್ರದ ಮಾಹಿತಿ ಪಡೆದು ಬದುಕು ಕಟ್ಟಿಕೊಳ್ಳುವುದು ಬಹಳ ಮುಖ್ಯ. ಇದಕ್ಕೆ ಕೌಶಲವೇ ಮಾರ್ಗದರ್ಶಿ ಎಂದು ಹೇಳಿದರು.
ಆರ್‌ಐಡಿಎಮ್ ಸಂಸ್ಥೆಯಿಂದ ಶಿಬಿರಾರ್ಥಿಗಳಿಗೆ ಟಿ-ಶರ್ಟ್ ವಿತರಿಸಿದರು.
ರಶ್ಮಿ ಅರಸ್, ಎನ್.ಎಸ್.ಎಸ್ ಅಧಿಕಾರಿ ಬಿ.ಕೆ. ಪ್ರಕಾಶ್, ಅಂಗನವಾಡಿ ಕಾರ್ಯಕರ್ತೆಯರಾದ ಆಶಾ ಸುಂದರಿ, ರೇಖಾ ಮತ್ತು ಕೆ. ಆರ್. ಯೋಗೇಶ್ ಇದ್ದರು.
