ಶಿವಮೊಗ್ಗ, ಜ 11: ಪತಿ ಸಾವಿನ ವಿಷಯ ತಿಳಿಯುತಿದ್ದಂತೇ ಪತ್ನಿಗೆ ಹೃದಯಾಘಾತವಾಗಿರುವ ಘಟನೆ ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲ್ಲೂಕಿನ ಸಾವಂತೂರು ಗ್ರಾಮದಲ್ಲಿ ನಡೆದಿದೆ. ವಯೋಸಹಜ ಅನಾರೋಗ್ಯದಿಂದ ಬಳಲುತ್ತಿದ್ದ ಹೊಳೆಯಪ್ಪ (90) ಇಂದು ಬೆಳಗ್ಗೆ ಮೃತಪಟ್ಟಿದ್ದಾರೆ. ಈ ವಿಚಾರ ತಿಳಿಯುತ್ತಿದ್ದಂತೆಯೇ ಪತ್ನಿ ಗಂಗಮ್ಮ (84) ಹೃದಯಾಘಾತ ಸಾವನ್ನಪ್ಪಿದ್ದಾರೆ. ಇದರೊಂದಿಗೆ ವೃದ್ದ ದಂಪತಿ ಸಾವಿನಲ್ಲೂ ಒಂದಾಗಿದೆ.
ಮೃತ ದಂಪತಿಗಳಿಗೆ ಇಬ್ಬರು ಗಂಡು ಗಂಡು ಐವರು ಹೆಣ್ಣು ಮಕ್ಕಳಿದ್ದಾರೆ. ಹಲವು ವರ್ಷಗಳಿಂದ ಸುದೀರ್ಘ ದಾಂಪತ್ಯ ನಡೆಸಿ ಅನ್ಯೋನ್ಯವಾಗಿದ್ದ ದಂಪತಿ ಸಾವಿನಲ್ಲೂ ಒಂದಾಗಿದೆ. ಇದೀಗ ಇಬ್ಬರ ಅಗಲಿಕೆಯಿಂದ ಕುಟುಂಬದವರ ಆಕ್ರಂದನ ಮುಗಿಲುಮುಟ್ಟಿದೆ.
