ತಾಲೂಕಿನ ವಿವಿಧೆಡೆ ಬಾಬಾ ಸಾಹೇಬ್ ಡಾ. ಬಿ.ಆರ್ ಅಂಬೇಡ್ಕರ್ ಜಯಂತಿ ಆಚರಿಸಲಾಯಿತು.
ತಾಲೂಕಿನ ತಾಲ್ಲೂಕು ಪಂಚಾಯಿತಿ, ಪಿಡಬ್ಲ್ಯೂಡಿ, ಭೀಮಾ ಮಹಿಳಾ ವಿವಿಧೋದ್ದೇಶ ಸೇವಾ ಸಂಘ ಮತ್ತು ವತಿಯಿಂದ ಮಹಾನ್ ಮಾನವತಾವಾದಿ ಬಾಬಾ ಸಾಹೇಬ್ ಡಾ. ಬಿ. ಆರ್. ಅಂಬೇಡ್ಕರ್ ಅವರ 133ನೇ ಜಯಂತಿಯನ್ನು ಆಚರಿಸಲಾಯಿತು.
ತಾಲೂಕು ಆಡಳಿತದ ವತಿಯಿಂದ ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಚಾಮರಾಜನಗರ ಲೋಕಸಭಾ ಕ್ಷೇತ್ರದ ಸಹಾಯಕ ಚುನಾವಣಾಧಿಕಾರಿ ಚಂದ್ರಶೇಖರ್ ಬಾಬಾ ಸಾಹೇಬ್ ಅಂಬೇಡ್ಕರ್ ಭಾವಚಿತ್ರಕ್ಕೆ ಪುಷ್ಪರ್ಚನೆ ಮಾಡಿ ಕಾರ್ಯಕ್ರಮಕ್ಕೆ ನೀಡಿದರು. ಅಂಬೇಡ್ಕರ್ ಅವರು ಮಹಾನ್ ಮೇಧಾವಿಗಳು ಇಂತಹ ವ್ಯಕ್ತಿಗಳ ಜಯಂತಿ ಆಚರಣೆ ಮಾಡುವುದು ಭಾರತೀಯರಾದ ನಮ್ಮೆಲ್ಲರ ಸೌಭಾಗ್ಯ. ಬಡತನದ ನಡುವೆ ಇವರು ವಿದೇಶದಲ್ಲಿ ವ್ಯಾಸಂಗ ಮಾಡಿ ಪದವಿ ಪಡೆದು ದೇಶದಲ್ಲಿ ಹೆಚ್ಚು ಪದವೀಗಳನ್ನು ಪಡೆದವರಲ್ಲಿ ಅಗ್ರಗಣ್ಯರು. ಇವರು ದೇಶಕ್ಕೆ ಸಮರ್ಥ ಸಂವಿಧಾನವನ್ನು ರಚಿಸಿಕೊಟ್ಟರು ಎಂದರು.
ತಹಸೀಲ್ದಾರ್ ಟಿ. ಜಿ. ಸುರೇಶ್ ಆಚಾರ್ ಮಾತನಾಡಿ, ಮಹನೀಯರ ಜಯಂತಿಯನ್ನು ಆಚರಿಸುವುದು ಮುಖ್ಯವಲ್ಲ. ಅವರ ಆದರ್ಶಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದರು. ಬಿಇಒ ಜಿ. ಶೋಭಾ, ಇನ್ಸ್ಪೆಕ್ಟರ್ ಮೇದಪ್ಪ, ತಾ. ಪಂ. ವ್ಯವಸ್ಥಾಪಕಿ ಶಿಲ್ಪಾ, ಮೀನುಗಾರಿಕೆ ಇಲಾಖೆಯ ಸಹಾಯಕ ನಿರ್ದೇಶಕಿ ಶ್ವೇತ, ಲೋಕೋಪಯೋಗಿ ಎಇಇ ಸತೀಶ್ ಚಂದ್ರನ್, ಸಮಾಜ ಕಲ್ಯಾಣಾಧಿಕಾರಿ ರಾಮೇಗೌಡ, ಪುರಸಭೆ ಮುಖ್ಯಾಧಿಕಾರಿ ವಸಂತಕುಮಾರಿ, ಸರ್ವೇ ಇಲಾಖೆಯ ಎಡಿ ಪಂಚಲಿಂಗಪ್ಪ, ಸರ್ಕಾರಿ ಪ್ರಾಥಮಿಕ ಶಿಕ್ಷಕರ ಸಂಘದ ಅಧ್ಯಕ್ಷ ಎಚ್ ಡಿ. ಮಾದಪ್ಪ, ತಾಲೂಕು ಅಂಬೇಡ್ಕರ್ ಸಂಘದ ಅಧ್ಯಕ್ಷ ಕರೋಹಟ್ಟಿ ಮಹದೇವಯ್ಯ, ತಾ. ಪಂ. ಮಾಜಿ ಉಪಾಧ್ಯಕ್ಷ ಪ್ರಸನ್ನ, ವಿಚಾರವಾದಿ ಪ್ರಭುಸ್ವಾಮಿ, ತಾಲೂಕು ಬಾಬು ಜಗಜೀವನ್ ರಾಮ್ ಸಂಘದ ಅಧ್ಯಕ್ಷ ಹುಣಸೂರು ಪುಟ್ಟಯ್ಯ, ಮೂಗೂರು ಸಿದ್ದರಾಜು, ಆಲಗೂಡು ಪುಟ್ಟಮಲ್ಲಯ್ಯ ಯಾದಡೋರೆ ಮಹಾದೇವಯ್ಯ ಅಧಿಕಾರಿವರ್ಗದವರು ಹಾಜರಿದ್ದರು.
ಲೋಕೋಪಯೋಗಿ ಇಲಾಖೆಯ ಕಚೇರಿಯಲ್ಲಿ ಎಎಇ ಸತೀಶ್ ಚಂದ್ರನ್ ಅವರು ಅಂಬೇಡ್ಕರ್ ಅವರ ಭಾವಚಿತ್ರಕ್ಕೆ ಮಾಲಾರ್ಪಣೆ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಎಇ ಮೋಹನ್,ಶಿವಸ್ವಾಮಿ, ಜೆಇ ರಮ್ಯಾ, ಪೂರ್ಣಿಮಾ, ಅಮೋಘ, ಹರೀಶ್, ಎಫ್ ಡಿಎ ಮಂಜುನಾನಾಥ್,ಸುಹಾಸ್, ರೇಖಾ, ಶಶಿಕಮಾರ್, ಬಾಲು ಇತರರು ಹಾಜರಿದ್ದರು.
ಭೀಮಾ ಮಹಿಳಾ ವಿವಿದ್ಧೇಶ ಸೇವಾ ಮತ್ತು ಸಹಕಾರ ಸಂಘದ ವತಿಯಿಂದ ಅಂಬೇಡ್ಕರ್ ಜಯಂತಿಯನ್ನು ಆಚರಿಸಲಾಯಿತು. ಉಪಾಧ್ಯಕ್ಷೆ ಸಾಕಮ್ಮ, ಕಾರ್ಯದರ್ಶಿ ಕೋಮಲಾಕ್ಷಿ ನಾಗರಾಜು, ಖಜಾಂಚಿ ಶ್ವೇತ, ಪ್ರಧಾನ ಕಾರ್ಯದರ್ಶಿ ಹೊನ್ನಮ್ಮ, ನಿರ್ದೇಶಕರಾದ ಸೌಭಾಗ್ಯ, ಮಲ್ಲಜಮ್ಮ, ನಾಗಮಣಿ, ರೋಜಾ ಇತರರು ಹಾಜರಿದ್ದರು.
