- 16 ಕಡೆಗಳಲ್ಲಿ ನಡೆದ ಬಿಜೆಪಿ ಪ್ರಚಾರ
ಪ್ರತಿನಿಧಿ ವರದಿ ಗೋಣಿಕೊಪ್ಪ
ಕೊಡಗಿನ ಸಮಸ್ಯೆಗೆ ಸ್ಪಂದಿಸಲು ಅವಕಾಶ ಮಾಡಿಕೊಡಿ ಎಂದು ಕೊಡಗು-ಮೈಸೂರು ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಯದುವೀರ್ ಒಡೆಯರ್ ಮನವಿ ಮಾಡಿಕೊಂಡರು.
ಬಸ್ ನಿಲ್ದಾಣದಲ್ಲಿ ಆಯೋಜಿಸಿದ್ದ ಪ್ರಚಾರ ಸಭೆಯಲ್ಲಿ ಮಾತನಾಡಿ, ಕ್ಷೇತ್ರ ಮೈಸೂರು ಭಾಗಕ್ಕೆ ಸೇರಿದ್ದರೂ, ಕೊಡಗು ಜಿಲ್ಲೆಯ ಸಾಕಷ್ಟು ಸಮಸ್ಯೆಗಳ ಅರಿವು ಇದೆ. ಇಲ್ಲಿನ ಸಮಸ್ಯೆಗಳಿಗೆ ಸ್ಪಂದಿಸುವ ಅವಕಾಶ ಬೇಕಿದೆ. ಆದರಿಂದ ಬಿಜೆಪಿ ಪಕ್ಷವನ್ನು ಅತೀ ಹೆಚ್ಚು ಮತಗಳಿಂದ ಗೆಲ್ಲಿಸಿ ಎಂದು ಮಾನವಿ ಮಾಡಿದರು.
ವಿಧಾನ ಸಭಾ ಮಾಜಿ ಅಧ್ಯಕ್ಷ ಕೆ. ಜಿ. ಬೋಪಯ್ಯ ಮಾತನಾಡಿ, ಕಾಂಗ್ರೆಸ್ ಸರ್ಕಾರ ಫ್ರೀ ಫ್ರೀ ಎಂದು ಜನರಿಗೆ ಮೋಸ ಮಾಡುವ ಕಾರ್ಯ ಮಾಡುತ್ತಿದೆ. ಇಂತಹ ಸರ್ಕಾರವನ್ನು ಕಿತ್ತೊಗೆಯ ಬೇಕು. ಸಮೀಕ್ಷೆಯಲ್ಲಿ ಬಿಜೆಪಿ ಮತ್ತು ಎನ್‌ಡಿಎ ಕೂಟಕ್ಕೆ 400 ಕ್ಕೂ ಹೆಚ್ಚು ಕ್ಷೇತ್ರ ಗೆಲುವು ದೊರೆಯುತ್ತದೆ ಎಂಬ ಮಾಹಿತಿ ಹೆಚ್ಚು ಕುಶಿ ಕೊಟ್ಟಿದೆ. ಮೋದಿ ಸರ್ಕಾರ ಮತ್ತೆ ಜಾರಿಗೆ ಬರಬೇಕಿದೆ ಎಂದರು.
ವಿಧಾನ ಪರಿಷತ್ ಸದಸ್ಯ ಮಂಡೇಪಂಡ ಸುಜಾ ಕುಶಾಲಪ್ಪ, ಮಾಜಿ ಎಂಎಲ್‌ಸಿ ಸುನಿಲ್ ಸುಬ್ರಮಣಿ, ಬಿಜೆಪಿ ಜಿಲ್ಲಾಧ್ಯಕ್ಷ ರವಿ ಕಾಳಪ್ಪ, ಮಾಜಿ ಜಿಲ್ಲಾಧ್ಯಕ್ಷ ಮಾಚಿಮಾಡ ರವೀಂದ್ರ, ವಿರಾಜಪೇಟೆ ಮಂಡಲ ಅಧ್ಯಕ್ಷ ಮಾಚಿಮಂಡ ಸುವಿನ್ ಗಣಪತಿ, ಬಿಜೆಪಿ ರಾಜ್ಯ ಕಾರ್ಯಕರಿಣಿ ಸದಸ್ಯೆ ಮಾಪಂಗಡ ಯಮುನಾ ಚೆಂಗಪ್ಪ, ಪ್ರಮುಖರಾದ ಪಟ್ಟಡ ರೀನಾ ಪ್ರಕಾಶ್, ಮಾಂಗೇರ ಪದ್ಮಿನಿ ಸೇರಿದಂತೆ ಪ್ರಮುಖರು ಉಪಸ್ಥಿತರಿದ್ದರು.
ಪೊನ್ನಂಪೇಟೆ, ಕಿರುಗೂರು, ಬಲ್ಯಮುಂಡೂರು, ಹುದಿಕೇರಿ, ಬಿರುನಾಣಿ, ಟಿ. ಶೆಟ್ಟಿಗೇರಿ, ಶ್ರೀಮಂಗಲ, ಕುಟ್ಟ, ನಾಲ್ಕೇರಿ, ಕೆ. ಬಾಡಗ, ಕಾನೂರು, ಬಾಳೆಲೆ, ನಿಟ್ಟೂರು, ಪೊನ್ನಪ್ಪಸಂತೆ, ತಿತಿಮತಿ, ಮಾಯಮುಡಿ, ದೇವರಪುರ, ಗೋಣಿಕೊಪ್ಪ, ರ‍್ವತೊಕ್ಲು, ಹಾತೂರು, ಚೆನ್ನಯ್ಯನಕೋಟೆ, ಪಾಲಿಬೆಟ್ಟ, ಮಾಲ್ದಾರೆ, ಸಿದ್ದಾಪುರ, ಕಾರ್ಮಾಡು, ಅಮ್ಮತ್ತಿ, ಹೊಸೂರು, ಬಿಳುಗುಂದ, ಕಣ್ಣಂಗಾಲ, ಚೆಂಬೆಳ್ಳೂರು, ಕಾಕೋಟುಪರಂಬು, ಕದನೂರು, ಕೆದಮುಳ್ಳೂರು, ಬಿಟ್ಟಂಗಾಲ, ಆರ್ಜಿ, ಬೇಟೋಳಿ, ಬಿ. ಶೆಟ್ಟಿಗೇರಿ ಶಕ್ತಿ ಕೇಂದ್ರಗಳಿಗೆ ಆಯೋಜಿಸಿದ್ದ 16 ಪ್ರಚಾರ ಸಭೆಯಲ್ಲಿ ಪಾಲ್ಗೊಂಡರು.
ಫೋಟೋ 7 ಜಿಕೆಪಿ 02 ; ಪೊನ್ನಂಪೇಟೆ ಬಸ್ ನಿಲ್ದಾಣದ ಎದುರು ಬಿಜೆಪಿ ಪ್ರಚಾರ ಸಭೆ.
