- ನಗರಸಭೆಯ ಹಿಂದಿನ ಪೌರಾಯುಕ್ತ ಎಸ್.ನಂಜುಂಡಸ್ವಾಮಿ ಸೇರಿ ನಾಲ್ವರಿಗೆ ಡಿಎಂಎ ನೋಟೀಸ್ ಜಾರಿ
ಪ್ರತಿನಿಧಿ ವರದಿ ಚಿಕ್ಕಮಾಳಿಗೆ ಕೊಳ್ಳೇಗಾಲ
ಪಟ್ಟಣದ ಉದಯರಂಗ(ಬಿಎಲ್‌ಎ) ಶೆಡ್ ಜಾಗದ ಏಕ ನಿವೇಶನವನ್ನು ಅಕ್ರಮವಾಗಿ ಬಹು ನಿವೇಶನಗಳಾಗಿ ವಿಂಗಡಿಸಿ ಹಕ್ಕು ಬದಲಾವಣೆ ಮಾಡಿಕೊಟ್ಟಿರುವ ಪ್ರಕರಣ ಕುರಿತು ನಗರಸಭೆಯ ನಗರಸಭಾ ಕಚೇರಿ ವ್ಯವಸ್ಥಾಪಕ ಬಿ.ನಿಂಗರಾಜು, ಬಿಲ್ ಕಲೆಕ್ಟರ್ ಮನಿಯಾ ಹಾಗೂ ಗ್ರೂಪ್ ಡಿ ನೌಕರ ಪ್ರಭಾಕರ್ ನೋಟೀಸ್ ಪಡೆದವರಾಗಿದ್ದು, ಇವರಿಂದ ಕರ್ನಾಟಕ ನಾಗರೀಕ ಸೇವಾ(ವರ್ಗಿಕರಣ, ನಿಯಂತ್ರಣ ಮತ್ತು ಮೇಲ್ಮನವಿ) ನಿಯಮಾಳಿ 1957ರ ನಿಯಮ 11ನೇ ನಿಯಮದಂ ಮೇರೆಗೆ ಕಾರಣ ಕೇಳುವ ನೋಟೀಸ್ ಇದಾಗಿದೆ.
ಈ ವಿಚಾರದಲ್ಲಿ ಸದರಿ ನೌಕರರು ಈ ನೋಟಿಸ್ ತಲುಪಿದ 15 ದಿನಗಳ ಒಳಗಾಗಿ ಈ ಬಗ್ಗೆ ಹೇಳಿಕೆ ಏನಾದರೂ ಇದ್ದಲ್ಲಿ ಲಿಖಿತ ಉತ್ತರವನ್ನು ಪೌರಾಡಳಿತ ನಿರ್ದೇಶನಾಲಯಕ್ಕೆ ಸಲ್ಲಿಸುವಂತೆ ಸೂಚಿಸಿದ್ದು, ಇವರು ಲಿಖಿತ ಉತ್ತರ ಸಲ್ಲಿಸದಿದ್ದಲ್ಲಿ ಇವರ ಹೇಳಿಕೆ ಏನು ಇಲ್ಲವೆಂದು ಪರಿಗಣಿಸುವ ಪೌರಾಡಳಿತ ನಿರ್ದೇಶಕರು ನಿಯಮಾನುಸಾರ ಮುಂದಿನ ಕ್ರಮ ಜರುಗಿಸಲಿದ್ದಾರೆ.
ಪ್ರಕರಣದ ಹಿನ್ನೆಲೆ: ಕೊಳ್ಳೇಗಾಲದ ಬಿಎಲ್‌ಎ ಬಸ್ ಶೆಡ್ ಆಸ್ತಿಯ ಮಾಲೀಕರಾಗಿದ್ದ ಎಂ.ವಿ.ಸುಬ್ರಹ್ಮಣ್ಯಂ ಅವರ (ಅ.ಸಂಖ್ಯೆ 559ರಲ್ಲಿ ಒಟ್ಟು 19,528 ಚದುರಡಿ) ಅವರ ಆಸ್ತಿಯನ್ನು ಅವರ ಪತ್ನಿ ಉಷಾ ಹಾಗೂ ಎಂ.ನಾಗೇಂದ್ರ ಪ್ರಸಾದ್, ಕೆ.ಎಸ್.ಶೇತಾ ಹಾಗೂ ಚಂದ್ರಕಾಂ ತಮ್ಮ ಅವರ ಹೆಸರಿಗೆ 2022 ಮೇ ವೇಳೆ ಹಿಂದಿನ ಪೌರಾಯುಕ್ತ ಎಸ್.ನಂಜುಂಡಸ್ವಾಮಿ(ಹಾಲಿ ನಂಜನಗೂಡು ನಗರಸಭೆ ಪೌರಾಯುಕ್ತರು) ಹಕ್ಕು ಬದಲಾವಣೆ ಮಾಡಿದ್ದರು.
ಈ ವೇಳೆ ಹಿಂದಿನಿಂದಲೂ ಪುರಸಭೆಗೆ ಸೇರಿದ ಅ.ನಂ.541/ಎರ ಬಾವಿ ಹಾಗೂ 9×19 ಮೀ. ಅಳತೆಯ ಸರ್ಕಾರಿ ನಿವೇಶನವನ್ನು ಅಕ್ರಮವಾಗಿ ಇವರ ಹೆಸರಿಗೆ ಸೇರಿಸಿ ಖಾತೆ ಮಾಡಿಕೊಡಲಾಗಿದೆ ಎಂಬುದಾಗಿ ನಗರಸಭಾ ಸದಸ್ಯ ಜಿ.ಪಿ.ಶಿವಕುಮಾರ್ ಡಿಸಿಗೆ ನೀಡಿದ್ದ ದೂರಿನ್ವಯ ಇದೀಗ ಖಾತೆ ಮಾಡಿಕೊಟ್ಟ ಅಧಿಕಾರಿ ಮತ್ತು ಮೂವರು ಸಿಬ್ಭಂದಿಗಳ ಕುರಿತು 2022 ಅ.6 ರಂದು ಜಿಲ್ಲಾಧಿಕಾರಿ, ಕೊಳ್ಳೇಗಾಲಕ್ಕೆ ತನಿಖಾ ತಂಡ ಕಳುಹಿಸಿ, ಹಕ್ಕು ಬದಲಾವಣೆ ಖಡತಗಳನ್ನು ಪರಿಶೀಲಿಸಿದ್ದರು.
ತನಿಖೆ ವೇಳೆ ಇಲ್ಲಿ ಹಕ್ಕು ಬದಲಾವಣೆಯಲ್ಲಿ ಸಾಕಷ್ಟು ನಿಯಮ ಉಲ್ಲಂಘಿಸಿ, ಆತುರಾತುವಾಗಿ ಖಾತೆ ಬದಲಾಯಿಸಿರುವುದರಿಂದ ಲಕ್ಷಾಂತರ ರೂ. ಸರ್ಕಾರದ ಬೊಕ್ಕಸಕ್ಕೆ ನಷ್ಟವಾಗಿರುವುದು ದೃಢಪಟ್ಟಿತ್ತು. ಈ ಕುರಿತು ಪ್ರಸ್ತಾಪಿಸಿರುವ ಪೌರಾಡಳಿತ ನಿರ್ದೇಶನಾಲಯ ಏ.2 ರಂದು ಆರೋಪಿತ ಅಧಿಕಾರಿಗಳಿಗೆ 1 ಟೂ 4 ನೋಟಿಸ್ ನೀಡಿರುವುದು ತಡವಾಗಿ ಬೆಳಕಿಗೆ ಬಂದಿದೆ.
23ಕೆಜಿಎಲ್-1
ಫೋಟೋ ಶೀರ್ಷಿಕೆ:
ಕೊಳ್ಳೇಗಾಲ ಪಟ್ಟಣದ ಬಿಎಲ್‌ಎ ಶೆಡ್ ಜಾಗದ ಏಕ ನಿವೇಶನವನ್ನು ಅಕ್ರಮವಾಗಿ ಬಹು ನಿವೇಶನಗಳಾಗಿ ವಿಂಗಡಿಸಿ ಹಕ್ಕು ಬದಲಾವಣೆ ಮಾಡಿಕೊಟ್ಟಿರುವ ಪ್ರಕರಣ ಕುರಿತು ಹಿಂದಿನ ಪೌರಾಯುಕ್ತ ಎಸ್.ನಂಜುAಡಸ್ವಾಮಿ ಹಾಗೂ ಗ್ರೂಪ್ ಡಿ ನೌಕರ ಪ್ರಭಾಕರ್ ಅವರಿಗೆ ಪೌರಾಡಳಿತ ನಿರ್ದೇಶಾನಲಯ ಅನುಬಂಧ-1 ರಿಂದ 4ರವರೆಗೆ ಜಾರಿ ಮಾಡಿರುವ ನೋಟೀಸ್ ಜಾರಿ ಪ್ರತಿ ಇದೆ ಹಾಗೂ ಅಧಿಕಾರಿಗಳ ಫೋಟೋ ಇದೆ.






