ಚುನಾವಣೆ ರಾಜಕೀಯದಿಂದ ಮಾಜಿ ಸಚಿವ ಕೆಎಸ್ ಈಶ್ವರಪ್ಪ ದೂರ ಉಳಿದ ಬಳಿಕ ಇದೀಗ ಮತ್ತೊಬ್ಬ ಸಚಿವ ಚುನಾವಣಾ ರಾಜಕೀಯದಿಂದ ದೂರ ಉಳಿಯುವ ಬಗ್ಗೆ ಮಾತನಾಡಿದ್ದಾರೆ.
ಮಾಜಿ ಸಚಿವ ಆನಂದ ಸಿಂಗ್ ರಾಜಕೀಯದಿಂದ ದೂರವಾಗೋ ಮಾತನಾಡಿದ್ದಾರೆ. ಒಂದು ಉಪಚುನಾವಣೆ ಸೇರಿದಂತೆ ಹೊಸಪೇಟೆ ಕ್ಷೇತ್ರದಿಂದ ನಾಲ್ಕು ಬಾರಿ ಗೆದ್ದಿರೋ ಆನಂದ ಸಿಂಗ್.ಕಳೆದ ವಿಧಾನಸಭಾ ಚುನಾವಣೆಯಲ್ಲಿ ಮಗ ಸಿದ್ಧಾರ್ಥ ಸಿಂಗ್ ಅವರನ್ನು ಕಣಕ್ಕೆ ಇಳಿಸಿದ್ದರು. ಲೋಕಸಭೆ ಚುನಾವಣೆಗೆ ಹೋಗೋ ಉದ್ದೇಶದಿಂದಲೇ ಮಗನನ್ನು ಕಣಕ್ಕಿಳಿಸಿದ್ದಾರೆ ಎನ್ನಲಾಗಿತ್ತು. ಆದ್ರೆ ಕಾಂಗ್ರೆಸ್ ಗ್ಯಾರಂಟಿ ಅಲೆಯಲ್ಲಿ ಸಿದ್ದಾರ್ಥ ಸೋಲನುಭವಿಸಿದರು. ಮಗನ ಜೊತೆಗೆ ಬಿಜೆಪಿಯ ದೊಡ್ಡ ಸೋಲು ಚುನಾವಣೆ ರಾಜಕೀಯದಿಂದ ಹಿಂದೆ ಸರಿಯುವಂತೆ ಮಾಡಿದೆ ಎನ್ನಲಾಗಿದೆ.