- ಕಲ್ಪತರು ಪ್ರಥಮದರ್ಜೆ ಕಾಲೇಜಿಗೆ ಶೇ.೧೦೦ರಷ್ಟು ಫಲಿತಾಂಶ
ಪ್ರತಿನಿಧಿ ವರದಿ ಕೆ.ಆರ್.ಪೇಟೆ
ಪಟ್ಟಣದ ಕಲ್ಪತರು ಪ್ರಥಮದರ್ಜೆ ಕಾಲೇಜು ಮೈಸೂರು ವಿಶ್ವವಿದ್ಯಾಲಯವು ನಡೆಸಿದ ಅಂತಿಮ ಬಿಎ ಮತ್ತು ಬಿಕಾಂ ಪರೀಕ್ಷೆಯಲ್ಲಿ ಶೇ.೧೦೦ರಷ್ಟು ಫಲಿತಾಂಶವನ್ನು ಪಡೆಯುವ ಮೂಲಕ ಅದ್ಭುತವಾದ ಸಾಧನೆಯನ್ನು ಮಾಡಿದೆ ಎಂದು ಕಾಲೇಜಿನ ಅಧ್ಯಕ್ಷ ಸಮಾಜಸೇವಕ ವಿಠಲಾಪುರ ಜಯರಾಂ ತಿಳಿಸಿದ್ದಾರೆ.
ಅಂತಿಮ ಬಿಎ ಮತ್ತು ಬಿಕಾಂ ಪರೀಕ್ಷೆಯಲ್ಲಿ ವಿದ್ಯಾರ್ಥಿಗಳು ಶೇ.೧೦೦ರಷ್ಟು ಸಾಧನೆಯನ್ನು ಮಾಡುವ ಮೂಲಕ ತಾಲೂಕಿನ ಕೀರ್ತಿಯನ್ನು ಬೆಳಗಿದ್ದಾರೆ. ಬಿಕಾಂ ವಿಭಾಗದಲ್ಲಿ ವಿದ್ಯಾರ್ಥಿನಿ ಐಶ್ವರ್ಯರವರು ರೀಟೆಲ್ ಮ್ಯಾನೇಜ್‌ಮೆಂಟ್ ವಿಷಯದಲ್ಲಿ ೧೦೦ಕ್ಕೆ ೯೮, ಸೋನಾಲಿರವರು ಎಚ್‌ಆರ್‌ಡಿ ವಿಷಯದಲ್ಲಿ ೧೦೦ಕ್ಕೆ ೯೬, ಶಮಂತರವರು ಎಂಪ್ಲಾಯಿಬಿಲಿಟಿ ಸ್ಕಿಲ್ಸ್ನಲ್ಲಿ ೧೦೦ಕ್ಕೆ ೯೩, ಪ್ರಮೋದ ಅವರು ಜಿಎಸ್‌ಟಿ ಪ್ರಾಕ್ಟೀಸ್‌ನಲ್ಲಿ ೧೦೦ಕ್ಕೆ೯೫, ರಕ್ಷಿತಾಅವರು ರಾಜ್ಯಶಾಸ್ತ್ರದಲ್ಲಿ ೮೮, ಚಂದನಾ ಅರ್ಥಶಾಸ್ತ್ರದಲ್ಲಿ ೮೮, ಅನುಷಾ ಭೂಗೋಳಶಾಸ್ತ್ರದಲ್ಲಿ ೯೦ಅಂಕಗಳನ್ನು ಪಡೆದುಕೊಂಡು ಕಾಲೇಜಿಗೆ ಕೀರ್ತಿಯನ್ನು ತಂದಿದ್ದಾರೆ. ಉತ್ತಮವಾದ ಫಲಿತಾಂಸ ಬರಲು ಕಾರಣರಾದ ಅಧ್ಯಾಪಕರು ಹಾಗೂ ವಿದ್ಯಾರ್ಥಿಗಳನ್ನು ಕಾಲೇಜಿನ ಅಧ್ಯಕ್ಷ ವಿಠಲಾಪುರ ಜಯರಾಂ ಅಭಿನಂದಿಸಿದ್ದಾರೆ.
