ಚಿಕ್ಕಬಳ್ಳಾಪುರ(ನ.23): ಟ್ಯಾಂಕರ್ ಹಾಗೂ ಆಟೋ ನಡುವೆ ಡಿಕ್ಕಿ ಸಂಭವಿಸಿದ ಪರಿಣಾಮ 7 ಕಾಲೇಜು ವಿದ್ಯಾರ್ಥಿಗಳು ಗಂಭೀರವಾಗಿ ಗಾಯಗೊಂಡ ಘಟನೆ ಚಿಕ್ಕಬಳ್ಳಾಪುರ ಜಿಲ್ಲೆಯ ಗೌರಿಬಿದನೂರು ತಾಲೂಕಿನ ಕಲ್ಲೂಡಿ ಬಳಿ ಇಂದು(ಗುರುವಾರ) ನಡೆದಿದೆ. ಲೋಕೇಶ್ (19), ಆಟೋ ಡ್ರೈವರ್ ಶ್ರೀನಿವಾಸ್, ವೆನ್ನೆಲಾ, ಸಹನ, ತ್ರಿವೇಣಿ, ಪವಿತ್ರ, ರೋಷಿಣಿಗೆ ತಲೆಗೆ ಗಂಭೀರವಾದ ಗಾಯವಾಗಿದೆ.
