ಪ್ರತಿನಿಧಿ ವರದಿ ಮಾಲೂರು
2024-25ನೇ ಸಾಲಿನ ಶೈಕ್ಷಣಿಕ ಬಲವರ್ಧನಾ ವರ್ಷ ಎಂದು ಇಲಾಖೆ ಘೋಷಣೆ ಮಾಡಿದ್ದು, ಅದರಂತೆ ಮಕ್ಕಳ ಶೈಕ್ಷಣಿಕವಾಗಿ ಬಲಗೊಳಿಸುವ ನಿಟ್ಟಿನಲ್ಲಿ ಕಾರ್ಯನಿರ್ವಹಣೆ ಮಾಡಲು ಅಗತ್ಯ ಕ್ರಮಗಳ ಬಗ್ಗೆ ಶಿಕ್ಷಕರಿಗೆ ಮಾರ್ಗದ ದರ್ಶನ ನೀಡಲಾಗಿದೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಎಚ್.ಎಸ್.ಚಂದ್ರಕಲಾ ಹೇಳಿದರು.
ತಾಲೂಕಿನಾದ್ಯಂತ ಶಾಲಾ ಪ್ರಾರಂಭೊತ್ಸವ ಕಾರ್ಯಕ್ರಮವನ್ನು ಪಟ್ಟಣದ ಸರ್ಕಾರಿ ಬಾಲಕಿಯರ ಹಿರಿಯ ಪ್ರಾಥಮಿಕ ಪಾಠಶಾಲೆಯ ಮಕ್ಕಳಿಗೆ ಹೂ ಗುಚ್ಛ ನೀಡಿ ಶಾಲಾ ಮಕ್ಕಳನ್ನು ಸ್ವಾಗತಿಸಿ ಮಾತನಾಡಿದರು.
ಮಕ್ಕಳ ದಾಖಲಾತಿ ಆಂದೋಲನ, ವಿಶ್ವ ಪರಿಸರದಿನ, ಶಾಲಾ ವೇಳಾಪಟ್ಟಿ, ಶಾಲಾ ಪಂಚಾಂಗ, ಶಿಕ್ಷಕರ ವೇಳಾಪಟ್ಟಿ, ಶಾಲಾಬಿವೃದ್ಧಿ ಯೋಜನೆ, ಶಾಲಾ ಶೈಕ್ಷಣಿಕ ಯೋಜನೆ, ಎಸ್,ಡಿ.ಎಂ.ಸಿ ಸಭೆ, ಶಿಕ್ಷಕರ ಸಭೆ, ಶಾಲಾ ಅವರಣ , ತರಗತಿ ಕೋಣೆ, ಅಡುಗೆ ಕೋಣೆ, ಶೌಚಾಲಯ ಸೇರಿದಂತೆ ಮೊದಲಾದ ಸ್ವಚ್ಛತಾ ಕಾರ್ಯಕ್ರಮಗಳ ಬಗ್ಗೆ ಅಗತ್ಯ ಮಾರ್ಗದರ್ಶನ ನೀಡಲಾಗಿದೆ. ಮಿಂಚಿನ ಸಂಚಾರದ ಮುಖಾಂತರ ಕ್ಷೇತ್ರ ಸಿಬ್ಬಂದಿಯೊಂದಿಗೆ ಶಾಲೆಗಳಿಗೆ ಭೇಟಿ ನೀಡಿ ಶಾಲೆಗಳ ಸಬಲೀಕರಣಕ್ಕೆ ಬೇಕಾದ ಮಾರ್ಗದರ್ಶನ ಮಾಡಲು ಸೂಚಿಸಿದೆ. ಸೇತುಬಂಧ ಚಟುವಟಿಕೆ, ವಿವಿಧ ಕ್ಲಬ್ ಗಳ ರಚನೆ, ವಿದ್ಯಾಪ್ರವೇಶ, ಸಂಭ್ರಮ ಶನಿವಾರ, ಇಕೋ ಕ್ಲಬ್, ಪಠ್ಯಪುಸ್ತಕ, ಸಮವಸ್ತ್ರ, ಎ.ಬೋರ್ಡ್ ಮೊದಲಾದ ವಿಚಾರಗಳ ಬಗ್ಗೆ ಕ್ಷೇತ್ರ ಸಿಬ್ಬಂದಿ ಪರಿಶೀಲಿಸಿ ಶಿಕ್ಷಕರಿಗೆ ತಿಳಿಸಲು ಸೂಚಿಸಲಾಗಿದೆ ಎಂದರು.
ಕ್ಷೇತ್ರ ಶಿಕ್ಷಣಾಧಿಕಾರಿಗಳ ಇಲಾಖೆಯ ಮೋಹನ್, ಶಾಲಾ ಶಿಕ್ಷಣ ಇಲಾಖೆ ಸಿ.ಆರ್.ಪಿ ನಾಗರಾಜ್, ಮುಖ್ಯ ಶಿಕ್ಷಕಿ ಮಂಜುಳ, ಶಿಕ್ಷಕರಾದ ಕಲ್ಲಹಳ್ಳಿ ನಾರಾಯಣಪ್ಪ, ಪ್ರಾಣೇಶ್, ಸುಧಾಕರ್, ವೀಣಾ, ಪದ್ಮಮ್ಮ , ವರಲಕ್ಷ್ಮಮ್ಮ, ಪಿಳ್ಳಪ್ಪ, ಮಂಜುನಾಥ್, ವಿಜಯಕುಮಾರ್ ಇದ್ದರು.

