PrathinidhiPrathinidhiPrathinidhi
  • ಮುಖಪುಟ
  • ಚುನಾವಣೆ
  • e-ರೇಡಿಯೋ
  • ಟಿ ವಿ
  • ಜಿಲ್ಲೆ
    • ಮೈಸೂರು ನಗರ
    • ಮೈಸೂರು ಗ್ರಾಮಾಂತರ
    • ಮಂಡ್ಯ
    • ಹಾಸನ
    • ಚಾಮರಾಜನಗರ
    • ಕೊಡಗು
  • ಇ-ಪೇಪರ್
  • ಎಡಿಟ್‌ ಪೇಜ್‌
  • ಕ್ರೀಡೆ
  • ಸಿನಿಮಾ
  • ಅಂಕಣ
  • Survey
Reading: 7ರಿಂದ ಗೌಡ ಲೆದರ್ ಬಾಲ್ ಸೀಸನ್-2 ಪಂದ್ಯಾವಳಿ
Share
Notification Show More
Font ResizerAa
PrathinidhiPrathinidhi
Font ResizerAa
  • ಮುಖಪುಟ
  • ಚುನಾವಣೆ
  • e-ರೇಡಿಯೋ
  • ಟಿ ವಿ
  • ಜಿಲ್ಲೆ
  • ಇ-ಪೇಪರ್
  • ಎಡಿಟ್‌ ಪೇಜ್‌
  • ಕ್ರೀಡೆ
  • ಸಿನಿಮಾ
  • ಅಂಕಣ
  • Survey
Search
  • ಮುಖಪುಟ
  • ಚುನಾವಣೆ
  • e-ರೇಡಿಯೋ
  • ಟಿ ವಿ
  • ಜಿಲ್ಲೆ
    • ಮೈಸೂರು ನಗರ
    • ಮೈಸೂರು ಗ್ರಾಮಾಂತರ
    • ಮಂಡ್ಯ
    • ಹಾಸನ
    • ಚಾಮರಾಜನಗರ
    • ಕೊಡಗು
  • ಇ-ಪೇಪರ್
  • ಎಡಿಟ್‌ ಪೇಜ್‌
  • ಕ್ರೀಡೆ
  • ಸಿನಿಮಾ
  • ಅಂಕಣ
  • Survey
Follow US
Prathinidhi > ಸುದ್ದಿ > ಕೊಡಗು > 7ರಿಂದ ಗೌಡ ಲೆದರ್ ಬಾಲ್ ಸೀಸನ್-2 ಪಂದ್ಯಾವಳಿ
ಕೊಡಗು

7ರಿಂದ ಗೌಡ ಲೆದರ್ ಬಾಲ್ ಸೀಸನ್-2 ಪಂದ್ಯಾವಳಿ

ಪ್ರತಿನಿಧಿ
Last updated: April 2, 2024 4:31 pm
ಪ್ರತಿನಿಧಿ
Published April 2, 2024
Share
SHARE

ಪ್ರತಿನಿಧಿ ವರದಿ ಮಡಿಕೇರಿ

ಕೊಡಗು ಗೌಡ ಯುವ ವೇದಿಕೆಯು 25ನೇ ವರ್ಷದ ಗೌಡ ಕ್ರೀಡಾಕೂಟದ ಬೆಳ್ಳಿಹಬ್ಬದ ಸಂಭ್ರಮದಲ್ಲಿದ್ದು, ವೃತ್ತಿಪರ ಕ್ರೀಡಾಕೂಟ ನಡೆಸುವ ಸಲುವಾಗಿ ಏ.17 ರಿಂದ 28ರ ವರೆಗೆ ಮಡಿಕೇರಿಯಲ್ಲಿ ಗೌಡ ಲೆದರ್ ಬಾಲ್ ಸೀಸನ್-2 ಪಂದ್ಯಾವಳಿಯನ್ನು ಆಯೋಜಿಸಿದೆ ಎಂದು ಯುವ ವೇದಿಕೆ ಅಧ್ಯಕ್ಷ ಪಾಣತ್ತಲೆ ಜಗದೀಶ್ ಮಂದಪ್ಪ ಹೇಳಿದರು.

ನಗರದ ಜನರಲ್ ತಿಮ್ಮಯ್ಯ ಜಿಲ್ಲಾ ಕ್ರೀಡಾಂಗಣದಲ್ಲಿ 12 ದಿನಗಳ ಕಾಲ ಪಂದ್ಯಾವಳಿ ಸೇರಿದಂತೆ ವಿವಿಧ ಕಾರ್ಯಕ್ರಮಗಳು ಜರುಗಲಿದೆ ಎಂದು ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು.
ಪಂದ್ಯಾವಳಿಯ ಬಿಡ್ಡಿಂಗ್ ಪ್ರಕ್ರಿಯೆಯು ಈಗಾಗಲೇ ನಡೆದಿದ್ದು, 10 ಫ್ರಾಂಚೈಸಿ ತಂಡಗಳು ಪಂದ್ಯಾವಳಿಯಲ್ಲಿ ಪಾಲ್ಗೊಳ್ಳಲಿದೆ. ಕ್ರೀಡಾಕೂಟದ ಎಲ್ಲಾ ಪಂದ್ಯಾವಳಿಗಳು ಯೂಟ್ಯೂಬ್ ನಲ್ಲಿ ನೇರ ಪ್ರಸಾರವಾಗಲಿದೆ. ಅಲ್ಲದೆ ಮೈದಾನದಲ್ಲಿ ಡಿಜಿಟಲ್ ಎಲ್ ಇ ಡಿ ಸ್ಕೋರ್ ಬೋರ್ಡನ್ನು ಅಳವಡಿಸಲಾಗುವುದು ಎಂದರು.
ಪಂದ್ಯಾವಳಿ ವೀಕ್ಷಣೆಗೆ ಬಂದ ಪ್ರೇಕ್ಷಕರಿಗೆ ಅನುಕೂಲವಾಗಲು ಮಳಿಗೆಗಳು ಮತ್ತು ಇತರ ಆಟೋಟ ಚಟುವಟಿಕೆಗಳ ಮಳಿಗೆಗಳನ್ನು ಇಡಲು ಅವಕಾಶ ಕಲ್ಪಿಸಲಾಗಿದೆ. ಈಗಾಗಲೇ ಈ ಕ್ರೀಡಾಕೂಟದ ಟೈಟಲ್ ಪ್ರಾಯೋಜಕತ್ವವನ್ನು “ಟೋಟಲ್ 1 ಸ್ಟಾಪ್ ಟೂಲ್ಸ್ ಜಿಪಿಎಲ್ ಪವರ್ಡ್ ಬೈ ತುಂತುರು” ಎಂದು ಹೆಸರಿಡಲಾಗಿದ್ದು, ಉತ್ತಮ ದರ್ಜೆಯ ಕೃಷಿ ಸಹಾಯಕ ಉತ್ಪನ್ನಗಳನ್ನು ಹೊಂದಿದೆ. ಕೊಡಗಿನ ಜನತೆ ಇದರ ಸದುಪಯೋಗ ಪಡೆದುಕೊಳ್ಳುವಂತೆ ಮನವಿ ಮಾಡಿದರು.

ಬೆಳ್ಳಿ ಮಹೋತ್ಸವದ ಪ್ರಯುಕ್ತ ಏ.27 ಮತ್ತು 28 ರಂದು ಗೌಡ ಮುಕ್ತ ಮಹಿಳಾ ಟೆನ್ನಿಸ್ ಬಾಲ್ ಕ್ರಿಕೆಟ್ ಪಂದ್ಯಾವಳಿ ಹಾಗೂ ಗ್ರಾಮವಾರು ಸಾಂಸ್ಕೃತಿಕ ಪೈಪೋಟಿ ಸೇರಿದಂತೆ ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದ್ದು, ಆಸಕ್ತರು ಏ.22ರ ಒಳಗೆ ಹೆಸರು ನೋಂದಾಯಿಸಿಕೊಳ್ಳುವAತೆ ಮನವಿ ಮಾಡಿದರು.
ಕ್ರೀಡಾಕೂಟದ ನಂತರ ಕೊಡಗು ಗೌಡ ಯುವ ವೇದಿಕೆ ಗೌಡ ಜನಾಂಗದ ಇತಿಹಾಸ, ಆಚಾರ, ವಿಚಾರಗಳು ಸೇರಿದಂತೆ ವಿವಿಧ ಮಾಹಿತಿಯುಳ್ಳ ಸ್ಮರಣ ಸಂಚಿಕೆಯನ್ನು ಹೊರತರ ತರಲಾಗುತ್ತಿದೆ ಎಂದರು.
ಟೆನ್ನಿಸ್ ಬಾಲ್ ಕ್ರಿಕೆಟ್ ಪಂದ್ಯಾವಳಿಯನ್ನು ನಡೆಸಲು ಈಗಾಗಲೇ ತಂಡವನ್ನು ರಚಿಸಲಾಗಿದ್ದು, ಸಂಚಾಲಕರಾಗಿ ಪುದಿಯನೆರವನ ರೇವತಿ ರಮೇಶ್, ಗೌರವ ಸಲಹೆಗಾರರಾಗಿ ಮೂಟೆರ ಪುಷ್ಪಾವತಿ ಆಯ್ಕೆಯಾಗಿದ್ದಾರೆ.
ಸಹ ಸಂಚಾಲಕರಾಗಿ ಚೊಕ್ಕಾಡಿ ಪ್ರೇಮ ರಾಘವಯ್ಯ, ತಳೂರು ಉಷಾರಾಣಿ, ದುಗ್ಗಳ ಕಾವ್ಯ ಕಪಿಲ್, ಕುದುಕುಳಿ ಇಂದಿರಾ ಭರತ್, ಪಡನೋಳನ ಪವಿತ್ರ ಅವರನ್ನು ನೇಮಕ ಮಾಡಲಾಗಿದೆ. ಅಲ್ಲದೇ ಗೌಡ ಮಹಿಳಾ ಸ್ವಯಂಸೇವಕರು ಕಾರ್ಯನಿರ್ವಹಿಸಲಿದ್ದಾರೆ ಎಂದು ಹೇಳಿದರು.

- ಜಾಹೀರಾತು -

ಮಹಿಳಾ ಕ್ರಿಕೆಟ್ ಕಪ್ ಸಂಚಾಲಕಿ ಪುದಿಯನೆರವನ ರೇವತಿ ರಮೇಶ್ ಮಾತನಾಡಿ, ಕೊಡಗು ಗೌಡ ಯುವವೇದಿಕೆ ಕಳೆದ 25 ವರ್ಷಗಳಿಂದ ಜಿಲ್ಲೆಯ ಗೌಡ ಜನಾಂಗದವರನ್ನು ಒಟ್ಟುಗೂಡಿಸಿ ಅನೇಕ ಅತ್ಯುತ್ತಮ ಕಾರ್ಯಕ್ರಮಗಳನ್ನು ನಡೆಸಿಕೊಂಡು ಬರುತ್ತಿದೆ. ಜಿಲ್ಲೆಯ ಹಳ್ಳಿ ಹಳ್ಳಿಗಳಿಂದ ಯುವ ಪ್ರತಿಭೆಗಳನ್ನು ಆಹ್ವಾನಿಸಿ ವೇದಿಕೆ ನೀಡುತ್ತಾ ಬಂದಿದೆ. ಜನಾಂಗದ ಸಂಪ್ರದಾಯ, ಆಚಾರ, ವಿಚಾರ, ಸಂಸ್ಕೃತಿ, ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಅದನ್ನು ಉಳಿಸಿ, ಬೆಳೆಸಿ ಮುಂದಿನ ಪೀಳಿಗೆಗೆ ಪರಿಚಯಿಸುತ್ತ ಅತ್ಯುತ್ತಮ ಸಂಘಟನೆಯಾಗಿ ಬೆಳೆದು ಇಂದು 25 ವರ್ಷಗಳ ಯಶಸ್ವಿ ಸಾಧನೆಯತ್ತ ಮುನ್ನಡೆಯುತ್ತಾ ಬೆಳ್ಳಿ ಹಬ್ಬವನ್ನು ಸಂಭ್ರಮದಿAದ ಆಚರಿಸಲು ಮುಂದಾಗಿದೆ ಎಂದು ಹೇಳಿದರು.
25 ವರ್ಷಗಳ ಯಶಸ್ವಿ ಪ್ರಯಾಣದತ್ತ ಸಾಗಿದ ಈ ಸಂಘಟನೆಯೂ ಕೊಡಗು, ದಕ್ಷಿಣ ಕನ್ನಡ ಜಿಲ್ಲೆಯ ಗೌಡ ಜನಾಂಗದ ಮಹಿಳೆಯರಿಗಾಗಿ ಇದೇ ಪ್ರಪ್ರಥಮ ಬಾರಿಗೆ ಕ್ರಿಕೆಟ್ ಕಪ್ ಅನ್ನು ನಡೆಸಲು ಮುನ್ನಡಿ ಇಟ್ಟಿದೆ.
ಕೊಡಗು ಮತ್ತು ದಕ್ಷಿಣ ಕನ್ನಡ ಜಿಲ್ಲೆಯ ಮಹಿಳಾ ಮಣಿಗಳು ಕ್ರೀಡಾಪಟುಗಳಾಗಿ ತಮ್ಮ ತಮ್ಮ ತಂಡವನ್ನು ರಚಿಸಿಕೊಂಡು ಯಾವುದೇ ವಯಸ್ಸಿನ ಮಿತಿ ಇಲ್ಲದ 5 ಓವರ್‌ನ ಕ್ರಿಕೆಟ್ ಪಂದ್ಯಾವಳಿಯಲ್ಲಿ ಭಾಗವಹಿಸಿ ಯಶಸ್ವಿಗೊಳಿಸಬೇಕಾಗಿ ಮನವಿ ಮಾಡಿದರು.
ಗೌರವ ಸಲಹೆಗಾರರಾದ ಮೂಟೇರ ಪುಷ್ಪಾವತಿ ಮಾತನಾಡಿ, ಏ.27 ಮತ್ತು 28 ರಂದು ಕೊಡಗು ಮತ್ತು ದಕ್ಷಿಣ ಕನ್ನಡ ಜಿಲ್ಲೆಯ 10 ಕುಟುಂಬ 18 ಗೋತ್ರದ ಮುಕ್ತ ಮಹಿಳಾ ಕ್ರಿಕೆಟ್ ಪಂದ್ಯಾವಳಿ ನಡೆಯಲಿದ್ದು, ತಂಡದಲ್ಲಿ ಗರಿಷ್ಟ 9 ಆಟಗಾರರನ್ನು ಹೊಂದಿರಬೇಕು. ಓವರ್ ಆರ್‌ಮ್ ಬೌಲಿಂಗ್‌ನೊAದಿಗೆ ಥ್ರೋ ಬೌಲಿಂಗ್‌ಗೂ ಅವಕಾಶ ಇರುತ್ತದೆ ಎಂದರು.
ಟೆನ್ನಿಸ್ ಬಾಲ್‌ನ ಇನ್ನಿತರ ಎಲ್ಲಾ ನಿಯಮಗಳನ್ನು ಅಳವಡಿಸಲಾಗುವುದು. ತಂಡದ ನೊಂದಾವಣಿ ಶುಲ್ಕ ರೂ.2,000 ಆಗಿದ್ದು, ಪ್ರಥಮ ವಿಜೇತ ತಂಡಕ್ಕೆ ರೂ. 20,000 ನಗದು ಹಾಗು ಆಕರ್ಷಕ ಟ್ರೋಫಿ, ದ್ವಿತೀಯ ಸ್ಥಾನ ಪಡೆದ ತಂಡಕ್ಕೆ ರೂ.10,000 ನಗರದು ಹಾಗೂ ಆಕರ್ಷಕ ಟ್ರೋಫಿ, ತೃತೀಯ ಸ್ಥಾನ ಪಡೆದ ತಂಡಕ್ಕೆ ರೂ.5,000 ನಗದು ಹಾಗೂ ಆಕರ್ಷಕ ಟ್ರೋಫಿ ನೀಡಲಾಗುವುದು. ಅಲ್ಲದೇ ವೈಯಕ್ತಿಕ ಬಹುಮಾನಗಳಾದ ವುಮೆನ್ ಆಫ್‌ದ ಟುರ್ನಮೆಂಟ್, ವುಮೆನ್ ಆಫ್‌ದ ಮ್ಯಾಚ್, ಬೆಸ್ಟ್ ಬ್ಯಾಟರ್, ಬೆಸ್ಟ್ ವಿಕೆಟ್ ಕೀಪರ್ ಸೇರಿದಂತೆ ಹಲವು ಆಕರ್ಷಕ ಬಹುಮಾನಗಳನ್ನು ನೀಡಲಾಗುವುದು ಎಂದು ಮಾಹಿತಿ ನೀಡಿದರು.
ತಂಡಗಳ ನೊಂದಾಣಿಗಾಗಿ ಪರಿಚನ ಸೋನಿ ಶರತ್-7676452107, ಪುದಿಯನೆರವನ ರೇವತಿ ರಮೇಶ್-9663254829, ಮೂಟೇರ ಪುಷ್ಪಾವತಿ-6362814659 ಸಂಪರ್ಕಿಸಬಹುದಾಗಿದೆ.
ಸುದ್ದಿಗೋಷ್ಠಿಯಲ್ಲಿ ಯುವ ವೇದಿಕೆ ಕ್ರೀಡಾಧ್ಯಕ್ಷ ಕುಟ್ಟನ ಪ್ರಶಾಂತ್, ಮಹಿಳಾ ಕ್ರಿಕೆಟ್ ಕಪ್ ಸಹ ಸಂಚಾಲಕರಾದ ಚೊಕ್ಕಾಡಿ ಪ್ರೇಮರಾಘವಯ್ಯ, ದುಗ್ಗಳ ಕಾವ್ಯ ಕಪಿಲ್ ಉಪಸ್ಥಿತರಿದ್ದರು.

 

 

 

 

 

Share This Article
Facebook Whatsapp Whatsapp Email
What do you think?
Love0
Sad0
Happy0
Sleepy0
Angry0
Dead0
Wink0
Leave a Comment

Leave a Reply Cancel reply

Your email address will not be published. Required fields are marked *

PODCAST

Prathinidhi Facebook

You Might Also Like

ಕೊಡಗು

ಕೈಮಗ್ಗ ಮತ್ತು ಜವಳಿ ಡಿಪ್ಲೋಮಾ ಕೋರ್ಸ್ ಗೆ ಅರ್ಜಿ ಆಹ್ವಾನ

May 12, 2024
ಕೊಡಗು

ಎನ್‌ಡಿಎ ಸರ್ಕಾರದಿಂದ ಪರಿಶಿಷ್ಟರ ನಿರ್ಲಕ್ಷ್ಯ

June 13, 2024
ಕೊಡಗು

ರಿಯಾಯಿತಿ ದರದಲ್ಲಿ ಪುಸ್ತಕ ಮಾರಾಟ

August 4, 2024
ಕೊಡಗು

ಒಕ್ಕಲಿಗ ದಾಳ ಉರುಳಿಸಿದ ಡಿಕೆಶಿ

April 14, 2024
prathinidhi_logo_white
ವೃತ್ತಿಪರರೇ ಸೇರಿ ಕಟ್ಟಿರುವ ಪತ್ರಿಕೆ ಪ್ರತಿನಿಧಿ. ಎರಡು ದಶಕಕ್ಕೂ ಹೆಚ್ಚು ಕಾಲ ಪತ್ರಿಕಾ ವೃತ್ತಿಯನ್ನು ಮಾಡಿದ ಅನುಭವದೊಂದಿಗೆ ಪತ್ರಿಕೆಯನ್ನು ಮುನ್ನಡೆಸಿಕೊಂಡು ಹೋಗುತ್ತಿದ್ದೇವೆ. ಪಕ್ಷಪಾತವಿಲ್ಲದ, ಯಾವುದೇ ಲೇಪನವನ್ನೂ ಅಂಟಿಸಿಕೊಳ್ಳದೆ ಗುಣಮಟ್ಟದ ಸುದ್ದಿಗಳಿಗೆ ಆದ್ಯತೆ ನೀಡುತ್ತಿದ್ದೇವೆ. ನಮಗೆ ಎಲ್ಲರೂ ಸಮಾನರು, ಯಾರ ಬಗ್ಗೆಯೂ ನಮ್ಮದೇ ಆದ ಅಭಿಪ್ರಾಯವಿಲ್ಲ. ತಪ್ಪು ಮಾಡುವ ಎಲ್ಲರನ್ನೂ ಟೀಕಿಸುತ್ತೇವೆ. ಒಳ್ಳೆಯದನ್ನು ಗೌರವಿಸುತ್ತೇವೆ. ಓದುಗರಿಗೆ ಅನ್ಯಾಯವಾಗದಂತೆ ಜವಾಬ್ದಾರಿಯಿಂದ ಸುದ್ದಿಗಳನ್ನು ಕೊಡುವುದಷ್ಟೇ ನಮ್ಮ ಆದ್ಯತೆ. ಇದೇ ಮನಸ್ಥಿತಿಯೊಂದಿಗೆ ಈಗ ಡಿಜಿಟಲ್‌ ವೇದಿಕೆಗೆ ಕಾಲಿಟ್ಟಿದ್ದೇವೆ. ಯೂಟ್ಯೂಬ್‌, ವೆಬ್ ಸೈಟ್‌, ಮೊಬೈಲ್‌ ಆಪ್‌ ಮತ್ತು ಇ- ರೆಡಿಯೋ ಮೂಲಕ ಸುದ್ದಿಗಳನ್ನು ಬಿತ್ತರಿಸುವ ಉದ್ದೇಶ ಹೊಂದಿದ್ದೇವೆ. ಓದುಗರ ಸಹಕಾರ ಬೇಡುತ್ತಾ ಮುಂದಡಿ ಇಡುತ್ತೇವೆ.
  • ನಮ್ಮ ಬಗ್ಗೆ
  • ನವಮಾಧ್ಯಮ ಪ್ರೈವೆಟ್‌ ಲಿ.
  • Privacy Policy
  • Terms And Conditions
  • ನಮ್ಮ ಬಗ್ಗೆ
  • ನವಮಾಧ್ಯಮ ಪ್ರೈವೆಟ್‌ ಲಿ.
  • Privacy Policy
  • Terms And Conditions
Facebook Twitter Youtube Whatsapp
© 2022 Navamadhyama Private Limited. All Rights Reserved. Designed by Codeflurry Technologies
Welcome Back!

Sign in to your account

Username or Email Address
Password

Lost your password?