PrathinidhiPrathinidhiPrathinidhi
  • ಮುಖಪುಟ
  • ಚುನಾವಣೆ
  • e-ರೇಡಿಯೋ
  • ಟಿ ವಿ
  • ಜಿಲ್ಲೆ
    • ಮೈಸೂರು ನಗರ
    • ಮೈಸೂರು ಗ್ರಾಮಾಂತರ
    • ಮಂಡ್ಯ
    • ಹಾಸನ
    • ಚಾಮರಾಜನಗರ
    • ಕೊಡಗು
  • ಇ-ಪೇಪರ್
  • ಎಡಿಟ್‌ ಪೇಜ್‌
  • ಕ್ರೀಡೆ
  • ಸಿನಿಮಾ
  • ಅಂಕಣ
  • Survey
Reading: ಪ್ರೊ ಕಬಡ್ಡಿ: ಬೆಂಗಳೂರು ಬುಲ್ಸ್‌ಗೆ ಸತತ 2ನೇ ಸೋಲು
Share
Notification Show More
Font ResizerAa
PrathinidhiPrathinidhi
Font ResizerAa
  • ಮುಖಪುಟ
  • ಚುನಾವಣೆ
  • e-ರೇಡಿಯೋ
  • ಟಿ ವಿ
  • ಜಿಲ್ಲೆ
  • ಇ-ಪೇಪರ್
  • ಎಡಿಟ್‌ ಪೇಜ್‌
  • ಕ್ರೀಡೆ
  • ಸಿನಿಮಾ
  • ಅಂಕಣ
  • Survey
Search
  • ಮುಖಪುಟ
  • ಚುನಾವಣೆ
  • e-ರೇಡಿಯೋ
  • ಟಿ ವಿ
  • ಜಿಲ್ಲೆ
    • ಮೈಸೂರು ನಗರ
    • ಮೈಸೂರು ಗ್ರಾಮಾಂತರ
    • ಮಂಡ್ಯ
    • ಹಾಸನ
    • ಚಾಮರಾಜನಗರ
    • ಕೊಡಗು
  • ಇ-ಪೇಪರ್
  • ಎಡಿಟ್‌ ಪೇಜ್‌
  • ಕ್ರೀಡೆ
  • ಸಿನಿಮಾ
  • ಅಂಕಣ
  • Survey
Follow US
Prathinidhi > ಸುದ್ದಿ > ಜಿಲ್ಲೆ > ಪ್ರೊ ಕಬಡ್ಡಿ: ಬೆಂಗಳೂರು ಬುಲ್ಸ್‌ಗೆ ಸತತ 2ನೇ ಸೋಲು
ಜಿಲ್ಲೆ

ಪ್ರೊ ಕಬಡ್ಡಿ: ಬೆಂಗಳೂರು ಬುಲ್ಸ್‌ಗೆ ಸತತ 2ನೇ ಸೋಲು

Prathinidhi News
Last updated: December 5, 2023 10:01 am
Prathinidhi News
Published December 5, 2023
Share
SHARE

ಅಹಮದಾಬಾದ್‌: ಪ್ರೊ ಕಬಡ್ಡಿ 10ನೇ ಆವೃತ್ತಿಯಲ್ಲಿ ಬೆಂಗಳೂರು ಬುಲ್ಸ್‌ ಸತತ 2ನೇ ಸೋಲುಂಡಿದೆ. ಬೆಂಗಾಲ್‌ ವಾರಿಯರ್ಸ್‌ ವಿರುದ್ಧ ಸೋಮವಾರ ನಡೆದ ಪಂದ್ಯದಲ್ಲಿ 30-32 ಅಂಕಗಳ ವೀರೋಚಿತ ಸೋಲು ಅನುಭವಿಸಿತು.

ಬಲಿಷ್ಠ ತಂಡ ಹೊಂದಿದ್ದರೂ, ನಿರ್ಣಾಯಕ ಹಂತಗಳಲ್ಲಿ ಎಡವುತ್ತಿರುವ ಬುಲ್ಸ್‌ ಲೀಗ್‌ನ ಆರಂಭದಲ್ಲೇ ತನ್ನ ಅಭಿಮಾನಿಗಳಲ್ಲಿ ಆತಂಕ ಮನೆ ಮಾಡುವಂತೆ ಮಾಡಿದೆ. ತಂಡದ ತಾರಾ ರೈಡರ್‌ ಭರತ್‌ ಹೂಡಾ, 2ನೇ ಪಂದ್ಯದಲ್ಲೂ ನಿರೀಕ್ಷೆ ಉಳಿಸಿಕೊಳ್ಳಲು ವಿಫಲರಾದರು. ಪಂದ್ಯದಲ್ಲಿ ಒಟ್ಟು 18 ರೈಡ್‌ಗಳನ್ನು ಮಾಡಿದ ಭರತ್‌ ಕೇವಲ 5 ರೈಡ್‌ ಅಂಕ ಗಳಿಸಲಷ್ಟೇ ಶಕ್ತರಾದರು.

ಆರಂಭದಲ್ಲೇ ಸಾಲು ಸಾಲು ತಪ್ಪುಗಳೊಂದಿಗೆ ಅಂಕಗಳನ್ನು ಬಿಟ್ಟುಕೊಟ್ಟ ಬುಲ್ಸ್‌, 4ನೇ ನಿಮಿಷದಲ್ಲಿ ಮೊದಲ ಅಂಕ ಸಂಪಾದಿಸಿತು. ಮೊದಲ 10 ನಿಮಿಷದಲ್ಲಿ ಭರತ್‌ ಒಂದೂ ಅಂಕ ಗಳಿಸದೆ ಇದ್ದದ್ದು ಬುಲ್ಸ್‌ ಹಿನ್ನಡೆಯಲ್ಲೇ ಉಳಿಯುವಂತೆ ಮಾಡಿತು. 12ನೇ ನಿಮಿಷದಲ್ಲಿ ನೀರಜ್‌ ನರ್ವಾಲ್‌ ಸೂಪರ್‌ ರೈಡ್‌ ಮೂಲಕ ಬುಲ್ಸ್‌ ಅಂಕಗಳ ಅಂತರವನ್ನು 7-8ಕ್ಕೆ ತಗ್ಗಿಸಿಕೊಳ್ಳಲು ನೆರವಾದರು. ಮೊದಲಾರ್ಧದ ಅಂತ್ಯಕ್ಕೆ ಬೆಂಗಾಲ್‌ 14-11ರ ಮುನ್ನಡೆ ಪಡೆಯಿತು.

ಮೊದಲ 20 ನಿಮಿಷಗಳಲ್ಲಿ ಭರತ್‌ 12 ನಿಮಿಷಗಳಿಗೂ ಹೆಚ್ಚು ಕಾಲ ಅಂಕಣದಿಂದ ಹೊರಗುಳಿಯಬೇಕಾಯಿತು. ದ್ವಿತೀಯಾರ್ಧದಲ್ಲೂ ಬುಲ್ಸ್‌ ಆಟ ಸುಧಾರಿಸಲಿಲ್ಲ. 25ನೇ ನಿಮಿಷದಲ್ಲಿ ಭರತ್‌ ಪಂದ್ಯದ ಮೊದಲ ಅಂಕ ಗಳಿಸಿದರೆ, 26ನೇ ನಿಮಿಷದಲ್ಲಿ ತಂಡ ಆಲೌಟ್‌ ಆಗಿ 15-23ರ ಹಿನ್ನಡೆ ಕಂಡಿತು.

- ಜಾಹೀರಾತು -

ಕೊನೆಯ 10 ನಿಮಿಷಗಳ ಆಟ ಬಾಕಿ ಇದ್ದಾಗ ಬುಲ್ಸ್‌ 10 ಅಂಕಗಳಿಂದ ಹಿಂದಿತ್ತು. ದೊಡ್ಡ ಸೋಲಿನತ್ತ ತಂಡ ಮುಖ ಮಾಡುತ್ತಿದೆ ಎನ್ನುವಷ್ಟರಲ್ಲಿ ಪುಟಿದೆದ್ದ ಬುಲ್ಸ್‌ 35ನೇ ನಿಮಿಷದಲ್ಲಿ ಬೆಂಗಾಲನ್ನು ಆಲೌಟ್‌ ಮಾಡಿ 36ನೇ ನಿಮಿಷದಲ್ಲಿ 28-28ರಲ್ಲಿ ಸಮಬಲ ಸಾಧಿಸಿತು.

ಪಂದ್ಯದಲ್ಲಿ ಕೊನೆ 15 ಸೆಕೆಂಡ್‌ ಬಾಕಿ ಇದ್ದಾಗ, ಬುಲ್ಸ್‌ 1 ಅಂಕದಿಂದ ಹಿಂದಿತ್ತು. ಕೊನೆಯ ರೈಡ್‌ನಲ್ಲಿ ಭರತ್‌ ಒಂದು ಅಂಕ ಗಳಿಸಿದ್ದರೂ ಪಂದ್ಯ ಟೈ ಆಗಿ ಬುಲ್ಸ್‌ಗೆ 3 ಅಂಕ ಸಿಗುತ್ತಿತ್ತು. ಆದರೆ ಭರತ್‌ ಎದುರಾಳಿ ಅಂಕಣದಲ್ಲಿ ದಿಕ್ಕೇ ತೋಚದಂತೆ ನಿಂತು ಸುಲಭವಾಗಿ ಅಂಕ ಬಿಟ್ಟುಕೊಟ್ಟರು. 2 ಅಂಕಗಳ ಅಂತರದಲ್ಲಿ ಬುಲ್ಸ್‌ ಸೋತು ನಿರಾಸೆಗೊಳಗಾಯಿತು. 11 ಅಂಕ ಕಲೆಹಾಕಿದ ಬೆಂಗಾಲ್‌ ನಾಯಕ ಮಣೀಂದರ್‌ ಸಿಂಗ್‌ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದರು.

ತವರಲ್ಲಿ ಖಾತೆ ತೆರೆಯಲು ಬೆಂಗ್ಳೂರು ಬುಲ್ಸ್‌ ಕಾತರ!

ಅಹಮದಾಬಾದ್‌ ಚರಣದಲ್ಲಿ ಆಡಿದ ಎರಡೂ ಪಂದ್ಯಗಳನ್ನು ಸೋತ ಬುಲ್ಸ್‌ ತನ್ನ ಮುಂದಿನ ಪಂದ್ಯವನ್ನು ತನ್ನ ತವರು ಬೆಂಗಳೂರಿನ ಕಂಠೀರವ ಕ್ರೀಡಾಂಗಣದಲ್ಲಿ ಆಡಲಿದೆ. ಡಿಸೆಂಬರ್ 8ರಂದು ತನ್ನ ತವರಿನ ಚರಣದ ಮೊದಲ ಪಂದ್ಯದಲ್ಲಿ ಬುಲ್ಸ್‌ಗೆ ದಬಾಂಗ್‌ ಡೆಲ್ಲಿ ಎದುರಾಗಲಿದೆ. ತವರಿನ ಚರಣದಲ್ಲಿ ಬುಲ್ಸ್‌ ಒಟ್ಟು 4 ಪಂದ್ಯಗಳನ್ನಾಡಲಿದೆ.

ಹಾಲಿ ಚಾಂಪಿಯನ್‌ ಜೈಪುರಕ್ಕೆ ಪುಣೇರಿ ವಿರುದ್ಧ ಸೋಲು

ಅಹಮದಾಬಾದ್‌: ಸೋಮವಾರ ಮೊದಲ ಪಂದ್ಯದಲ್ಲಿ ಹಾಲಿ ಚಾಂಪಿಯನ್‌ ಜೈಪುರ ಪಿಂಕ್‌ ಪ್ಯಾಂಥರ್ಸ್‌ಗೆ ಪುಣೇರಿ ಪಲ್ಟನ್‌ ವಿರುದ್ಧ 33-37ರ ಸೋಲು ಎದುರಾಯಿತು. ಅರ್ಜುನ್‌ ದೇಶ್ವಾಲ್‌ 17 ರೈಡ್‌ಗಳಲ್ಲಿ 17 ಅಂಕ ಕಲೆಹಾಕಿದರೂ, ಜೈಪುರವನ್ನು ಗೆಲ್ಲಿಸಲು ಸಾಧ್ಯವಾಗಲಿಲ್ಲ.

ಇಂದಿನ ಪಂದ್ಯ: ಗುಜರಾತ್‌-ಮುಂಬಾ, ರಾತ್ರಿ 8ಕ್ಕೆ

Share This Article
Facebook Whatsapp Whatsapp Email
What do you think?
Love0
Sad0
Happy0
Sleepy0
Angry0
Dead0
Wink0
Leave a Comment

Leave a Reply Cancel reply

Your email address will not be published. Required fields are marked *

PODCAST

Prathinidhi Facebook

You Might Also Like

ಜಿಲ್ಲೆಮುಖಪುಟ

ಮುಂದಿನ ಮೂರು ದಿನ ಭಾರೀ ಮಳೆ, ಹವಾಮಾನ ಇಲಾಖೆ ಮುನ್ಸೂಚನೆ!

April 19, 2024
ಜಿಲ್ಲೆ

ಜಪ್ತಿಯಾದ ₹72 ಲಕ್ಷ ಗುಳುಂ, ಇನ್‌ಸ್ಪೆಕ್ಟರ್‌ಗೆ ತಲೆ ಬಿಸಿ..!

November 25, 2023
ಜಿಲ್ಲೆ

ತನ್ನ ಪ್ರೀತಿಗೆ ಅಡ್ಡಿಯಾದ ಅಂತ ಪ್ರಿಯಕರನ ಜೊತೆಗೂಡಿ ಭಾವನನ್ನೆ ಕೊಲ್ಲಿಸಿದ ನಾದಿನಿ

January 11, 2024
ಜಿಲ್ಲೆ

ಡಿಜೆ ಹಳ್ಳಿ, ಕೆಜಿ ಹಳ್ಳಿ ಗಲಭೆ ಕೇಸ್:​ ಪೊಲೀಸರ ಕ್ರಮ ಒಪ್ಪಿ ಈಗ ಬಂಧಿತರು ಅಮಾಯಕರು ಎಂದರೆ ಹೇಗೆ: ಬೊಮ್ಮಾಯಿ

January 7, 2024
prathinidhi_logo_white
ವೃತ್ತಿಪರರೇ ಸೇರಿ ಕಟ್ಟಿರುವ ಪತ್ರಿಕೆ ಪ್ರತಿನಿಧಿ. ಎರಡು ದಶಕಕ್ಕೂ ಹೆಚ್ಚು ಕಾಲ ಪತ್ರಿಕಾ ವೃತ್ತಿಯನ್ನು ಮಾಡಿದ ಅನುಭವದೊಂದಿಗೆ ಪತ್ರಿಕೆಯನ್ನು ಮುನ್ನಡೆಸಿಕೊಂಡು ಹೋಗುತ್ತಿದ್ದೇವೆ. ಪಕ್ಷಪಾತವಿಲ್ಲದ, ಯಾವುದೇ ಲೇಪನವನ್ನೂ ಅಂಟಿಸಿಕೊಳ್ಳದೆ ಗುಣಮಟ್ಟದ ಸುದ್ದಿಗಳಿಗೆ ಆದ್ಯತೆ ನೀಡುತ್ತಿದ್ದೇವೆ. ನಮಗೆ ಎಲ್ಲರೂ ಸಮಾನರು, ಯಾರ ಬಗ್ಗೆಯೂ ನಮ್ಮದೇ ಆದ ಅಭಿಪ್ರಾಯವಿಲ್ಲ. ತಪ್ಪು ಮಾಡುವ ಎಲ್ಲರನ್ನೂ ಟೀಕಿಸುತ್ತೇವೆ. ಒಳ್ಳೆಯದನ್ನು ಗೌರವಿಸುತ್ತೇವೆ. ಓದುಗರಿಗೆ ಅನ್ಯಾಯವಾಗದಂತೆ ಜವಾಬ್ದಾರಿಯಿಂದ ಸುದ್ದಿಗಳನ್ನು ಕೊಡುವುದಷ್ಟೇ ನಮ್ಮ ಆದ್ಯತೆ. ಇದೇ ಮನಸ್ಥಿತಿಯೊಂದಿಗೆ ಈಗ ಡಿಜಿಟಲ್‌ ವೇದಿಕೆಗೆ ಕಾಲಿಟ್ಟಿದ್ದೇವೆ. ಯೂಟ್ಯೂಬ್‌, ವೆಬ್ ಸೈಟ್‌, ಮೊಬೈಲ್‌ ಆಪ್‌ ಮತ್ತು ಇ- ರೆಡಿಯೋ ಮೂಲಕ ಸುದ್ದಿಗಳನ್ನು ಬಿತ್ತರಿಸುವ ಉದ್ದೇಶ ಹೊಂದಿದ್ದೇವೆ. ಓದುಗರ ಸಹಕಾರ ಬೇಡುತ್ತಾ ಮುಂದಡಿ ಇಡುತ್ತೇವೆ.
  • ನಮ್ಮ ಬಗ್ಗೆ
  • ನವಮಾಧ್ಯಮ ಪ್ರೈವೆಟ್‌ ಲಿ.
  • Privacy Policy
  • Terms And Conditions
  • ನಮ್ಮ ಬಗ್ಗೆ
  • ನವಮಾಧ್ಯಮ ಪ್ರೈವೆಟ್‌ ಲಿ.
  • Privacy Policy
  • Terms And Conditions
Facebook Twitter Youtube Whatsapp
© 2022 Navamadhyama Private Limited. All Rights Reserved. Designed by Codeflurry Technologies
Welcome Back!

Sign in to your account

Username or Email Address
Password

Lost your password?